ಹುಲಿದುರ್ಗಾ ಚಿತ್ರೀಕರಣ ಮುಕ್ತಾಯ
Posted date: 17 Sun, Jan 2016 – 10:33:44 AM

ಕೆ.ವಿ.ಎಸ್. ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ, ಕೆ.ಸುಧಾಕರ್ ನಿರ್ಮಿಸುತ್ತಿರುವ  ಹುಲಿದುರ್ಗಾ ಚಿತ್ರಕ್ಕೆ ಹಾಕಿಕೊಂಡ ಯೋಜನೆಯಂತೆ ಹಾಡುಗಳ ಚಿತ್ರೀಕರಣದೊಂದಿಗೆ ಪೂರ್ಣಗೊಂಡಿತು. ಚಿತ್ರದ ನಿರ್ದೇಶನ- ವಿಕ್ರಮ್ ಯಶೋಧರ.ಎಸ್, ಛಾಯಾಗ್ರಹಣ -ರಮೇಶ್ ರಾಜ್, ಸಂಕಲನ- ಈಶ್ವರ್.ಇ.ಎಸ್, ಸಂಗೀತ-ಸಿದ್ದು, ಕುಮಾರ್, ಕಲೆ-ರೇವಣ್ಣ, ಸಾಹಿತ್ಯ - ಡಾ||ವಿ.ನಾಗೇಂದ್ರಪ್ರಸಾದ್, ಮನೋಹರ್ ಕಿರಾಳು, ಸಾಹಸ-ಡ್ಯಾನಿ, ಜಾನಿ, ಲೋಬೋ, ಸಹನಿರ್ದೇಶನ-ಮಹೇಶ್, ನಿರ್ವಹಣೆ-ಮೈಸೂರು ಕೃಷ್ಣ, ಮಂಜುನಾಥಸ್ವಾಮಿ.  ತಾರಾಗಣದಲ್ಲಿ - ಸುಪ್ರೀತ್, ನೇಹಾ ಪಾಟೀಲ್, ರಘುವಿಜಯ್, ಗುರುರಾಜ್ ಹೊಸಕೋಟೆ, ನಿಶಾಂತ್, ಲಕ್ಷ್ಮಣ್, ಭೂಪತಿ, ಗಣಪತಿ, ಮುಂತಾದವರಿದ್ದಾರೆ.
ಮಾದ ಮತ್ತು ಮಾನಸಿ  ರಾಜರಾಜೇಶ್ವರಿ ನಗರದಲ್ಲಿ
ರಾಜೇಶ್ & ದೇವಿ ಫಿಲಂಸ್ ಲಾಂಛನದಲ್ಲಿ ಮನೋಮೂರ್ತಿ ಸಂಗೀತ ನೀಡಿ ನಿರ್ಮಾಣ ಮಾಡುತ್ತಿರುವ ಮಾದ ಮತ್ತು ಮಾನಸಿ ಚಿತ್ರಕ್ಕೆ ರಾಜರಾಜೇಶ್ವರಿ ನಗರದಲ್ಲಿ ಪ್ರಜ್ವಲ್, ಶ್ರುತಿ ಹರಿಹರಣ್, ಶೋಭರಾಜ್, ಪವನ್ ಅಭಿನಯಿಸಿದ ದೃಶ್ಯಗಳು ಚಿತ್ರೀಕರಣವಾದವು. ಸತೀಶ್ ಪ್ರಧಾನ್ ನಿರ್ದೇಶನದ, ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು - ನರಸಿಂಹಮೂರ್ತಿ (ನರ್ಸಿ), ಛಾಯಾಗ್ರಹಣ - ಕೆ.ಎಸ್. ಚಂದ್ರಶೇಖರ್, ಸಹಕಾರ ನಿರ್ದೇಶನ - ಹೆಚ್.ಕೆ. ಮೌಲಾಕ್ಷ, ನೃತ್ಯ - ಇಮ್ರಾನ್, ಕಲೈ, ಪ್ರಭು ಶ್ರೀನಿವಾಸ್, ಸಾಹಸ- ಡಿಫರೆಂಟ್ ಡ್ಯಾನಿ, ಸಂಕಲನ - ಕೆ.ಎಂ.ಪ್ರಕಾಶ್, ನಿರ್ವಹಣೆ - ಮೈಸೂರು ಸುರೇಶ್, ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ಶೃತಿ ಹರಿಹರನ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ಶೋಭರಾಜ್, ಪವನ್ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed